LSG Vs DC: ಲಖನೌ ಸೂಪರ್ ಜಯಂಟ್ಸ್ ತಂಡದ ವಿರುದ್ಧ ಭರ್ಜರಿ ಗೆಲುವನ್ನು ಧಾಖಲಿಸಿದ ಡೆಲ್ಲಿ ಕ್ಯಾಪಿಟಲ್ಸ್
ಲಖನೌ: ನಿನ್ನೆ ನಡೆದ ಪಂದ್ಯದಲ್ಲಿ ಲಖನೌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಗೆಲುವನ್ನು ದಾಖಲಿಸಿತು. ಆ ಮೂಲಕ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿತು.
ಲಖನೌ-167 ರನ್ ಕಲೆ ಹಾಕಿದ್ದ ಲಖನೌ
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಲಖನೌ ಸೂಪರ್ ಜಯಂಟ್ಸ್ ತಂಡ ತನ್ನ ಪಾಲಿನ 20 ಓವರ್ ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 167 ರನ್ಗಳನ್ನು ಕಲೆ ಹಾಕಿತ್ತು. ಎಲ್ಎಸ್ಜಿ ಪರ ನಾಯಕ ಕೆ ಎಲ್ ರಾಹುಲ್ 39 ರನ್ ಗಳಿಸಿದ್ದರೆ, ಆಯುಷ್ ಬದೋನಿ ಅಜೇಯ 55 ರನ್ ಗಳಿಸಿದರು. ಇನ್ನು ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಎಲ್ಎಸ್ಜಿ ಬ್ಯಾಟಿಂಗ್ ವೈಫಲ್ಯ
ಮೊದಲ ಇನಿಂಗ್ಸ್ ಆರಂಭಿಸಿದ ಲಖನೌ ಸೂಪರ್ ಜಯಂಟ್ಸ್ ತಂಡ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತ್ತು. ನಾಯಕ ಕೆ ಎಲ್ ರಾಹುಲ ಬಿಟ್ಟರೆ ಬೇರೆ ಯಾರು ಬ್ಯಾಟ್ಸಮನ್ ಗಳ ವೈಫಲ್ಯ ಅನುಭವಿಸಿದರು. ಡಿಕಾಕ್ (19) ಸಿಕ್ಕ ಉತ್ತಮ ಆರಂಭವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಎಡವಿದರು. ದೇದವತ್ ಪಡಿಕ್ಕಲ್ (3), ಮಾರ್ಕಸ್ ಸ್ಟೋಯ್ನಿಸ್ (8) ಹಾಗೂ ನಿಕೋಲಸ್ ಪೂರನ್ (0) ವಿಫಲರಾದರು.
ಡೆಲ್ಲಿ ಕ್ಯಾಪಿಟಲ್ಸ್ 170-6
ಲಖನೌ ಸೂಪರ್ ಜಯಂಟ್ಸ್ ನೀಡಿದ್ದ 168 ರನ್ಗಳ ಗುರಿ ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಡೇವಿಡ್ ವಾರ್ನರ್ ಅವರನ್ನು ಔಟ್ ಮಾಡುವ ಮೂಲಕ ಯಶ್ ಠಾಕೂರ್ ಆರಂಭಿಕ ಆಘಾತ ನೀಡಿದ್ದರು. ಆದರೆ, ಎರಡನೇ ವಿಕೆಟ್ಗೆ ಜೊತೆಯಾದ ಪೃಥ್ವಿ ಶಾ ಹಾಗೂ ಜೇಕ್ ಫ್ರಸರ್ ಮೆಗಾರ್ಕ್ 39 ರನ್ ಜೊತೆಯಾಟವಾಡಿ ಪವರ್ಪ್ಲೇನಲ್ಲಿ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು.ಇನ್ನು ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
ಜೇಕ್ ಮೆಗರ್ಕ್ ಅರ್ಧಶತಕ
22 ಎಸೆತಗಳಲ್ಲಿ 32 ರನ್ ಗಳಿಸಿ ಪೃಥ್ವಿ ಶಾ, ರವಿ ಬಿಷ್ಣೋಯ್ಗೆ ವಿಕೆಟ್ ಒಪ್ಪಿಸಿದರು. ಆದರೆ, ಅತ್ಯುತ್ತಮ ಬ್ಯಾಟ್ ಮಾಡಿದ ಡೆಬ್ಯೂಟೆಂಟ್ ಜೇಕ್ ಮೆಗರ್ಕ್ ಲಖನೌ ಬೌಲರ್ಗಳನ್ನು ಸಮರ್ಥವಾಗಿ ದಂಡಿಸಿದರು. ಇವರು ಎದುರಿಸಿದ 35 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 2 ಬೌಂಡರಿಗಳೊಂದಿಗೆ 55 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಾಯಕ ರಿಷಭ್ ಪಂತ್ ಕೇವಲ 24 ಎಸೆತಗಳಲ್ಲಿ 41 ರನ್ ಗಳಿಸಿ ವಿಕೆಟ್ ಒಪ್ಪಿಸಿ ತಂಡವನ್ನು ಬಹುತೇಕ ಗೆಲುವಿನ ಸನಿಹ ತಂದಿದ್ದರು.
ಸ್ಕೋರ್ ವಿವರ
ಲಖನೌ ಸೂಪರ್ ಜಯಂಟ್ಸ್: 20 ಓವರ್‌ಗಳಿಗೆ 167-7 (ಆಯುಷ್ ಬದೋನಿ 55*, ಕೆಎಲ್ ರಾಹುಲ್ 39, ಅರ್ಷದ್ ಖಾನ್ 20*; ಕುಲ್ದೀಪ್ ಯಾದವ್ 20ಕ್ಕೆ 3, ಖಲೀಲ್ ಅಹ್ಮದ್ 41ಕ್ಕೆ 2)
ಡೆಲ್ಲಿ ಕ್ಯಾಪಿಟಲ್ಸ್: 18.1 ಓವರ್‌ಗಳಿಗೆ 170-4 (ಜೇಕ್ ಫ್ರಸರ್ ಮೆಗಾರ್ಕ್ 55, ರಿಷಭ್ ಪಂತ್ 41, ಪೃಥ್ವಿ ಶಾ 32; ರವಿ ಬಿಷ್ಣೋಯ್ 25ಕ್ಕೆ 2)
ಇನ್ನು ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
Post a Comment